April 18, 2026
WhatsApp Image 2026-04-18 at 9.50.06 AM

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜನತಾದಳ (ಜಾತ್ಯಾತೀತ) ಘಟಕದಲ್ಲಿ ಸಂಘಟನಾ ಬಲವರ್ಧನೆಗೆ ಒತ್ತು ನೀಡಿರುವ ಪಕ್ಷದ ರಾಜ್ಯ ನಾಯಕತ್ವ, ಮಹತ್ವದ ನೇಮಕಾತಿಗಳ ಮೂಲಕ ಹೊಸ ಚೈತನ್ಯ ತುಂಬಲು ಮುಂದಾಗಿದೆ.

ಜಿಲ್ಲಾ ಘಟಕದ ನೂತನ ಕಾರ್ಯಧ್ಯಕ್ಷರಾಗಿ ಶಶಿರಾಜ ಶೆಟ್ಟಿ ಕೊಳಂಬೆ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಯೋಗಿಶ್ ಶೆಟ್ಟಿ ಜಪ್ಪು ಅವರನ್ನು ನೇಮಕ ಮಾಡಲಾಗಿದ್ದು, ಜಿಲ್ಲಾ ಸಮಿತಿಯ ಸಂಪೂರ್ಣ ಪಟ್ಟಿಯನ್ನೂ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ಅವರ ಶಿಫಾರಸಿನಂತೆ ಈ ನೇಮಕಾತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ H. D. Kumaraswamy ಅವರು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಘೋಷಿಸಿದರು.

ಜಿಲ್ಲಾ ಸಮಿತಿ ಪ್ರಮುಖರು:
ಅಧ್ಯಕ್ಷರು: ಜಾಕೆ ಮಾಧವ ಗೌಡ ಪಂಜಿತ್ತಾಡಿ
ಕಾರ್ಯಧ್ಯಕ್ಷರು: ಶಶಿರಾಜ ಶೆಟ್ಟಿ ಕೊಳಂಬೆ

ಉಪಾಧ್ಯಕ್ಷರು: ಅಜೀಜ್ ಮಲಾರ್ (ಉಳ್ಳಾಲ), ದಯಾಕರ್ ಆಳ್ವ (ಸುಳ್ಯ), ಸಿ.ಪಿ. ಸೈಮನ್ (ಕಡಬ), ಅಜೀಜ್ ಕುದ್ರೋಳಿ (ಮಂಗಳೂರು)

ಮಹಾ ಪ್ರಧಾನ ಕಾರ್ಯದರ್ಶಿ: ಯೋಗಿಶ್ ಶೆಟ್ಟಿ ಜಪ್ಪು

ಕಾರ್ಯದರ್ಶಿಗಳು: ಮೋಹನ್‌ದಾಸ್ ಶೆಟ್ಟಿ, ಪುತ್ತು ಮೋನು ಹುಸೇನ್ (ಮಂಗಳೂರು), ಪ್ರಿಯಾ ಸಾಲಿಯಾನ್ (ಪುತ್ತೂರು), ಮುನೀರ್ ಮುಕ್ಕಚೇರಿ

ಖಜಾಂಚಿ: ಗಂಗಾಧರ ಉಳ್ಳಾಲ

ಸಂಘಟನಾ ಕಾರ್ಯದರ್ಶಿಗಳು: ಧರ್ಮರಾಜ ಗೌಡ (ಕೊಕ್ಕಡ), ಎಐ.ಸಿ. ಕೈಲಾಶ್ ಕೆದಂಬಾಡಿ, ಸುಮತಿ ಹೆಗ್ಡೆ (ಮಂಗಳೂರು), ಉಸ್ಮಾನಕ್ಕ (ಉಳ್ಳಾಲ), ಸುಮಿತ್ ಸುವರ್ಣ, ವೆಂಕಟೇಶ್ ತಡಂಬೈಲ್

ಈ ನೇಮಕಾತಿ ಪಟ್ಟಿಯನ್ನು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ವಿ. ನಾಡಗೌಡ ಹಾಗೂ ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ ಅವರು ಜಿಲ್ಲಾ ಮುಖಂಡರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗೊಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಜಿಲ್ಲಾ ವಿದ್ಯಾರ್ಥಿ ಜನತಾದಳ ಅಧ್ಯಕ್ಷ ನಿಹಾಲ್ ಎಸ್. ಕೋಡ್ತುಗುಳಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ವೇಗ, ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ರಾಜಕೀಯ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಈ ನೇಮಕಾತಿಗಳನ್ನು ಕೈಗೊಳ್ಳಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.

About The Author

Leave a Reply