September 27, 2026
thmb-2024-05-02T124142.102.jpg

ಮಂಗಳೂರು : ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ನಗದು, ಐಫೋನ್, ಪಾಸ್‌ಪೋರ್ಟ್ ಹಾಗೂ ಚಿನ್ನದ ಉಂಗುರವನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಮಯಪ್ರಜ್ಞೆಯಿಂದ ಮಾಲೀಕರಿಗೆ ಸುರಕ್ಷಿತವಾಗಿ ತಲುಪಿಸಿದೆ.

ಜುಲೈ 26 ರಂದು ಬೆಳಿಗ್ಗೆ ಸುಮಾರು 6:15 ರ ಸುಮಾರಿಗೆ ವಿಮಾನ ನಿಲ್ದಾಣದ ಕೆಳ ಅಂತಸ್ತಿನ ಪಾರ್ಕಿಂಗ್ ಪ್ರದೇಶದಲ್ಲಿದ್ದ ಲಗೇಜ್ ಟ್ರಾಲಿಯೊಂದರ ಮೇಲೆ ಕಪ್ಪು ಬಣ್ಣದ ಸಣ್ಣ ಪರ್ಸ್‌ ಅನ್ನು ಸೆಕ್ಯುರಿಟಿ ಸಿಬ್ಬಂದಿ ವಿಠಲ್ ಹೊಸಮನಿ ಗಮನಿಸಿದ್ದಾರೆ. ತಕ್ಷಣವೇ ಅವರು ಸಿಐಎಸ್‌ಎಫ್ ಪಡೆಯ ಕ್ಯೂಆರ್‌ಟಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ಹಾಗೂ ಶ್ವಾನ ದಳ ತಪಾಸಣೆ ನಡೆಸಿ, ಅಪಾಯಕಾರಿ ವಸ್ತುಗಳಿಲ್ಲ ಎಂದು ಖಚಿತಪಡಿಸಿಕೊಂಡವು.

ಪರ್ಸ್‌ ತೆರೆದು ಪರಿಶೀಲಿಸಿದಾಗ ಅದರಲ್ಲಿ ನಿಶಾಲ್ ಶಹೀಕ್ ಹೆಸರಿನ ಪಾಸ್‌ಪೋರ್ಟ್, ಐಫೋನ್, ಒಂದು ಚಿನ್ನದ ಉಂಗುರ, 10,000 ಅಮೆರಿಕನ್ ಡಾಲರ್ (ಸುಮಾರು ₹9,00,000), 500 ಯುಎಇ ದಿರ್ಹಮ್ಸ್ (ಸುಮಾರು ₹11,000), ಬೋರ್ಡಿಂಗ್ ಪಾಸ್ ಹಾಗೂ ಬ್ಯಾಂಕ್ ಕಾರ್ಡ್‌ಗಳು ಕಂಡುಬಂದಿವೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಬೋರ್ಡಿಂಗ್ ಪಾಸ್ ಆಧಾರದ ಮೇಲೆ, ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX 814) ವಿಮಾನದಲ್ಲಿ ಆಗಮಿಸಿದ್ದ ನಿಶಾಲ್ ಶಹೀಕ್ ಅವರ ಮೊಬೈಲ್ ಸಂಖ್ಯೆಯನ್ನು ಏರ್‌ಲೈನ್ಸ್ ಮುಖಾಂತರ ಪಡೆದು ಸಂಪರ್ಕಿಸಲಾಯಿತು. ಬಳಿಕ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದ ಪ್ರಯಾಣಿಕನ ದಾಖಲೆಗಳನ್ನು ಪರಿಶೀಲಿಸಿ, ನಿಯಮಾವಳಿಗಳಂತೆ ಎಲ್ಲಾ ವಸ್ತುಗಳನ್ನು ಹಸ್ತಾಂತರಿಸಲಾಗಿದೆ.

About The Author

Leave a Reply