Visitors have accessed this post 360 times.
70 ರ ದಶಕದಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿಯಾಗಿ ಕರಾವಳಿಯಲ್ಲಿ ವಿಶ್ವ ಹಿಂದೂ ಪರಿಷತ್ ನ್ನು ದೊಡ್ಡ ಮಟ್ಟದಲ್ಲಿ ಕಟ್ಟಿ ಬೆಳೆಯಲು ಮೂಲ ಕಾರಣಿ ಕರ್ತರು ಹಾಗೂ ನಮ್ಮ ಸೇವಾ ಪ್ರಕಲ್ಪಗಳಾದ ಪಜೀರು ಗೋ ಶಾಲೆ ಹಾಗೂ ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರವನ್ನು ನಿರ್ಮಿಸಲು ಕಾರಣಿಕರ್ತರಾದ ಸಾವಿರಾರು ಕಾರ್ಯಕರ್ತರಿಗೆ ಪ್ರೇರಣಾದಾಯಿಯಾದಂತಹ ಸ್ವರ್ಗೀಯ ಎಲ್ ಶ್ರೀಧರ ಭಟ್ ರವರಿಗೆ “ಶ್ರದ್ಧಾಂಜಲಿ ಅರ್ಪಣೆ” ಕಾರ್ಯಕ್ರಮ ಕದ್ರಿ ವಿಶ್ವಶ್ರೀ ಕಾರ್ಯಾಲಯದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಾನಗರ ಸಂಘಚಾಲಕ್ ಡಾ l ಸತೀಶ್ ಪ್ರಭು, ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯಾಧ್ಯಕ್ಷರು ಡಾl ಎಂಬಿ ಪುರಾಣಿಕ್, ಕ್ಷೇತ್ರೀಯ ಮಠಮಂದಿರ ಅರ್ಚಕ ಪುರೋಹಿತ್ ಸಂಪರ್ಕ ಪ್ರಮುಖ್ ಶ್ರೀ ಬಸವರಾಜ್ ಜೀ, ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್, ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಪ್ರಾಂತ ದುರ್ಗಾವಾಹಿನಿ ಪ್ರಮುಖ್ ಶ್ರೀಮತಿ ಸುರೇಖಾ ರಾಜ್, ವಿಭಾಗ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ್, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.