Visitors have accessed this post 298 times.

ತುಳುನಾಡು ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಘಟಕ ನೂತನ ಸಾರಥಿಗಳ ನೇಮಕ

Visitors have accessed this post 298 times.

ದಿನಾಂಕ 12-6-2024 ಬುಧವಾರ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಕಚೇರಿಯಲ್ಲಿ ಉಳ್ಳಾಲ ತಾಲೂಕು ಅಧ್ಯಕ್ಷರಾದ ಅಬೂಬಕರ್ ಕೈರಂಗಳದವರ ಉಪಸ್ಥಿತಿಯಲ್ಲಿ ತಾಲೂಕು ಗೌರವಾಧ್ಯಕ್ಷರಾಗಿ ಡಾ. ಶೇಕ್ ಭಾವ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸುಕೇಶ್ ಜಿ.ಕೆ. ಉಚ್ಚಿಲ್ ರವರನ್ನು ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿರುತ್ತಾರೆ ಉಳ್ಳಾಲ ದಲ್ಲಿ ತುಳುನಾಡ ರಕ್ಷಣಾ ವೇದಿಕೆಯು ಕಳೆದ 15 ವರ್ಷಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಜನರ ಹೃದಯದಲ್ಲಿ ಮನೆ ಮಾಡಿದೆ ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವ ತುಳುನಾಡ ರಕ್ಷಣಾ ವೇದಿಕೆಗೆ ಉತ್ತಮ ಸಮಾಜ ಸೇವಕರು, ಶೈಕ್ಷಣಿಕ ಕ್ಷೇತ್ರದಲ್ಲಿ ಚಿರಪರಿಚಿತರು ನೂತನ ಸಾರಥಿಗಳಾಗಿ ನೇಮಕ ಆಗಿರೋದು ಉಳ್ಳಾಲ ತಾಲೂಕು ಜನರಲ್ಲಿ ಇನ್ನಷ್ಟು ಆಶಾಭಾವನೆ ಮೂಡಿದ್ದು ಉಳ್ಳಾಲದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಜನರ ಧ್ವನಿಯಾಗಿ ತುಳುನಾಡು ರಕ್ಷಣೆ ವೇದಿಕೆಯು ಮುಂದಿನ ದಿನಗಳಲ್ಲಿ ಕಾರ್ಯವನ್ನು ಮಾಡಲಿದೆ.

Leave a Reply

Your email address will not be published. Required fields are marked *