![](https://i0.wp.com/mediaonekannada.com/wp-content/uploads/2024/09/WhatsApp-Image-2024-09-24-at-7.15.49-PM.jpeg?fit=1166%2C1600&ssl=1)
ಪುತ್ತೂರು: ಮುಖ್ಯರಸ್ತೆ ಬದಿಯ ಚರಂಡಿಯ ಮೇಲ್ಭಾಗದಲ್ಲಿ ಹಾಕಲಾಗಿದ್ದ ಪೈಪ್‌ನಲ್ಲಿ ಮಹಿಳೆಯ ಕಾಲು ಸಿಲುಕಿದ ಘಟನೆ ಸೋಮವಾರ ಸಂಜೆ ಪುತ್ತೂರಿನಲ್ಲಿ ನಡೆದಿದೆ.
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-05-at-10.49.10.jpeg?fit=1091%2C839&ssl=1)
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-04-at-13.51.12.jpeg?fit=1200%2C1000&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0008.jpg?fit=1600%2C1191&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0009.jpg?fit=1431%2C859&ssl=1)
ಪುತ್ತೂರು ನಗರದ ಹೂವಿನ ಮಾರುಕಟ್ಟೆ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮುಖ್ಯರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್‌ಲೈನ್ ಹಾಕಲಾಗಿತ್ತು. ಇದು ಕೆಲವು ಸಮಯಗಳಿಂದ ತುಂಡಾಗಿದ್ದು, ಸಂಬಂಧಪಟ್ಟವರಿಗೆ ಈ ಬಗ್ಗೆ ವಿಷಯ ತಿಳಿಸುವ ಪ್ರಯತ್ನ ನಡೆಸಲಾಗಿತ್ತು.
ಆದರೂ ಈ ಬಗ್ಗೆ ನಗರಾಡಳಿತ ಎಚ್ಚೆತ್ತುಕೊಂಡಿರಲಿಲ್ಲ. ಸೋಮವಾರ ಸಂಜೆ ಪುತ್ತೂರಿಗೆ ಆಗಮಿಸಿದ್ದ ಮಹಿಳೆಯೊಬ್ಬರು ಪೈಪ್‌ಲೈನೊಳಗಡೆ ಕಾಲಿಟ್ಟಿದ್ದಾರೆ. ಪರಿಣಾಮ ಕಾಲು ಪೈಪ್‌ನಲ್ಲಿ ಸಿಲುಕಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೈಪ್‌ಲೈನ್ ಅನ್ನು ಕತ್ತರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
![](https://i0.wp.com/mediaonekannada.com/wp-content/uploads/2024/10/addd.jpg?fit=720%2C1436&ssl=1)