ಬಂಟ್ವಾಳ ತಾಲೂಕಿನ ನಾವೂರು, ದೇವಸ್ಯಪಡೂರು, ಸರಪಾಡಿ ಗ್ರಾಮದಲ್ಲಿ ಮಳೆಹಾನಿ, ಪ್ರಾಕೃತಿಕ ವಿಕೋಪ, ಪ್ರವಾಹಪೀಡಿತ ಪ್ರದೇಶಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿಪಾದೆ ಚರ್ಚ್ ಧರ್ಮಗುರುಗಳಾದ ಫಾ.ರೋಬರ್ಟ್ ಡಿಸೋಜ, ಚರ್ಚ್ ಉಪಾಧ್ಯಕ್ಷರಾದ. ನವೀನ್ ಮೊರಾಸ್, ಸರಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿನ್ಸೆಂಟ್ ಪಿಂಟೋ, ಬಾಲಕೃಷ್ಣ ಪೂಜಾರಿ, ನಾವೂರು ಗ್ರಾಮ ಪಂಚಾಯಿತಿ ಸದಸ್ಯರಾದ ಲವೀನಾ ಮೊರಾಸ್, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಆರ್. ಅಂಚನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ನಾವೂರು ಗ್ರಾಮ ಪಂಚಾಯಿತಿ ಸದಸ್ಯರಾದ ಫಾರೂಕ್, ಯೋಗೀಶ್, ಎಸ್‌ಟಿ ಘಟಕ ಅಧ್ಯಕ್ಷರಾದ ಚಂದ್ರಹಾಸ ನಾಯ್ಕ್ ಬಲಯೂರು, ಸುರೇಶ್ ಶೆಟ್ಟಿ ಹಾಲಾಡಿ, ಮಿಥುನ್ ಸ್ವೀಕೆರಾ, ಸತೀಶ್ ಪೂಜಾರಿ ಕುದಿಂಜ ಹಾಗೂ ಸ್ಥಳೀಯ ನಾಯಕರು, ಪಕ್ಷದ ಕಾರ್ಯಕರ್ತ ಜತೆಗಿದ್ದರು.