Visitors have accessed this post 872 times.
ಜೆರುಸಲೇಂ: ಮೆಕ್ಕಾದಲ್ಲಿ ಗರಿಷ್ಠ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಈ ಹಿನ್ನಲೆ ಹಜ್ ಯಾತ್ರೆಗೆ ತೆರಳಿದ್ದ 550 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮುಸ್ಲಿಮರ ಪವಿತ್ರ ಯಾತ್ರೆ ಎಂದೇ ಕರೆಸಿಕೊಳ್ಳುವ ಹಜ್ ಯಾತ್ರೆ ಜೂನ್ 14ರಿಂದ ಪ್ರಾರಂಭವಾಗಿತ್ತು. ಮೆಕ್ಕಾಗೆ ಹಜ್ ಯಾತ್ರೆ ಭಾಗವಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ವರ್ಷ ಪ್ರತಿ ಭೇಟಿ ನೀಡುತ್ತಾರೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಮೆಕ್ಕಾವೂ ಒಂದು. ಈ ಬಾರಿ ಜೋರ್ಡಾನ್‌ನ ಕನಿಷ್ಠ 60 ಯಾತ್ರಿಕರು ಬಿಸಿಲಿನ ತಾಪದಿಂದ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಸಾಕಷ್ಟು ಮಂದಿ ಈಜಿಪ್ಟ್ ನಾಗರಿಕರು ಎನ್ನಲಾಗಿದೆ
ಪ್ರತಿ ವರ್ಷವೂ ಹಜ್ ಯಾತ್ರೆಯ ಸಮಯದಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯೆಸ್ನಷ್ಟಿರುತ್ತಿತ್ತು ಈ ಬಾರಿ ಭಾರಿ ಏರಿಕೆ ಕಂಡಿದೆ. ಹವಾಮಾನ ಬದಲಾವಣೆಯು ಹಜ್ ಯಾತ್ರೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಳೆದ ತಿಂಗಳು ಪ್ರಕಟವಾದ ಸೌದಿ ಅಧ್ಯಯನದ ಪ್ರಕಾರ, ಧಾರ್ಮಿಕ ಆಚರಣೆಗಳನ್ನು ನಡೆಸುವ ಪ್ರದೇಶದಲ್ಲಿ ತಾಪಮಾನವು ಪ್ರತಿ ದಶಕದಲ್ಲಿ 0.4 C (0.72 F) ಏರುತ್ತಿದೆ.
ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರವು ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್‌ಹೀಟ್) ತಲುಪಿದೆ ಎಂದು ಹೇಳಿದೆ.