Visitors have accessed this post 397 times.

ವಿಮಾನ ನಿಲ್ದಾಣದಲ್ಲಿ ಪವಿತ್ರ ಉಮ್ರಾ ಯಾತ್ರೆಯ ಯಾತ್ರಾರ್ಥಿಯಿಂದ ಹಣ ಕಳವು ಆರೋಪ, ಕಳವು ಜಾಲ ಭೇದಿಸುವಂತೆ ಯೋಗೀಶ್ ಶೆಟ್ಟಿ ಜಪ್ಪು ಒತ್ತಾಯ

Visitors have accessed this post 397 times.

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಬದ್ರುದ್ದೀನ್ ಕದಂಬಾರ್ ಎನ್ನುವವರು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಹೆಂಡತಿ, ಮಕ್ಕಳ ಜೊತೆ ವಾಸವಾಗಿದ್ದು ಮದುವೆ ಮಾರಂಭಗಳಿಗೆ ಜ್ಯೂಸ್ ತಯಾರಿಸಿ ಕೊಡುವ ಕೆಲಸ ಮಾಡಿಕೊಂಡಿರುತ್ತಾರೆ. ಇವರು ಈ ಹಿಂದೆ ಸುಮಾg 25 ವರ್ಷಗಳ ಕಾಲ ಸೌದಿ ಅರೇಬಿಯ ದೇಶದಲ್ಲಿ ಕೆಲಸ ಮಾಡಿದ್ದರಿಂದ ಅಲ್ಲಿನ ಬಹುತೇಕ ಪ್ರದೇಶಗಳ ಪರಿಚಯವಿದ್ದು ಅರೇಬಿಕ್ ಭಾಷೆ ಬಲ್ಲವರಾಗಿರುತ್ತಾರೆ.

ಸುಮಾರು ಒಂದು ವರ್ಷದ ಹಿಂದೆ ಇವರ ಪರಿಚಯದ ಅತ್ತಾವರದ ನಿವಾಸಿ ಅಜ್ಯಾದ್ ಟ್ರಾವೆಲ್ಸ್‌ನ ಮಾಲಕರಾದ ಇಕ್ಬಾಲ್‌ರವರು ಇವರಿಗೆ ಸೌದಿ ಅರೇಬಿಯದ ಪ್ರದೇಶಗಳ ಜ್ಞಾನ ಮತ್ತು ಅರೇಬಿಕ್ ಭಾಷೆ ತಿಳಿದಿದ್ದರಿಂದ ಹಜ್ ಮತ್ತು ಉಮ್ರಾ
ಯಾತ್ರೆಗೆ ಹೋಗುವ ಪ್ರಯಾಣಿಕರ ಜೊತೆ ಗೈಡ್ ಮತ್ತು ಅಡುಗೆ ಮಾಡುವ ಕೆಲಸಕ್ಕೆ ಬರುವಂತೆ ಕೋರಿಕೊಂಡಿರುತ್ತಾರೆ. ಅವರ ಕೋರಿಕೆಗೆ ಒಪ್ಪಿ ಈ ಹಿಂದೆ ಬದ್ರುದ್ದೀನ್ ಅವರು 3 ಬಾರಿ ಇಕ್ಬಾಲ್‌ರವರ ಜೊತೆ ಉಮ್ರಾ ಯಾತ್ರೆಗೆ ಪ್ರಯಾಣಿಕರ ಜೊತೆ ಹೋಗಿರುತ್ತಾರೆ. ಬದ್ರುದ್ದೀನ್ ರವರು ಹೇಳುವುದೇನೆಂದರೆ ಉಮ್ರಾ ಯಾತ್ರೆಗೆ ಕೈಗೊ ವ ಹೆಚ್ಚಿನವರು ಹಿರಿಂi ರು ಮತ್ತು ಮೊದಲ ಬಾರಿಗೆ ಪ್ರಯಾಣ ಕೈಗೊಳ್ಳುವವರಾಗಿರುತ್ತಾರೆ. ದಿನಾಂಕ 3೦-04-2024 ರಂದು ಅಜ್ಯಾದ್ ಟ್ರಾವೆಲ್ಸ್ ಮಾಲಕರಾದ ಇಕ್ಬಾಲ್‌ರವರು ಒಟ್ಟು 34 ಪ್ರಾಯಣಿಕರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಮಾರ್ಗವಾಗಿ ಸೌದಿ ಅರೇಬಿಯ ದೇಶದ ಜಿದ್ದಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುವ ಬಗ್ಗೆ ಬದ್ರುದ್ದೀನ್ ಜೊತೆ ಮಾತನಾಡಿ ಪ್ರಯಾಣದಲ್ಲಿ ಬದ್ರುದ್ದೀನ್‌ರವರನ್ನು ಸೇರಿಸಿಕೊಂಡಿರುತ್ತಾರೆ.ಅದರಂತೆ ಇಕ್ಬಾಲ್‌ರವರು ಒಟ್ಟು 11 ಜನ ವಯಸ್ಸಾದ ಪ್ರಯಾಣಿಕರನ್ನು ನೋಡಿಕೊಳ್ಳುವ ಜವಾಬ್ದಾರಿ ಹಾಗೂ ಅವರ ಖರ್ಚು ವೆಚ್ಚಗಳಿಗೆ 26,432/- ಸೌದಿ ರಿಯಾಲ್ (ಸುಮಾರು 6 ಲಕ್ಷ ರೂಪಾಯಿ ಭಾರತೀಯ ಮೌಲ್ಯ) ಹಣವನ್ನು ಬದ್ರುದ್ದೀನ್‌ರವರಿಗೆ ನೀಡಿರುತ್ತಾರೆ. ಬದ್ರುದ್ದೀನ್ ರವರು ಈ ಹಣವನ್ನು ತನ್ನ ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿಕೊಂಡಿರುತ್ತಾರೆ.

ದಿನಾಂಕ 30-04-2024 ರಂದು ಮಧ್ಯಾಹ್ನ 2.30 ಗೆ ಬದ್ರುದ್ದೀನ್ ರವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿರುತ್ತಾರೆ. ಇವರುಗಳಿಗೆ ಮುಂಬೈ ಮಾರ್ಗದ ಟಿಕೇಟ್‌ಗಳು ಇಂಡಿಗೋ ವಿಮಾನ ಸಂಸ್ಥೆ 6E6523 ಯಲ್ಲಿ ಬುಕ್ ಆಗಿರುತ್ತದೆ. ಉಮ್ರಾ ಯಾತ್ರೆಗೆ ಹೋಗುವ ಎಲ್ಲಾ 34 ಪ್ರಯಾಣಿಕರಿಗೆ ನೀಲಿ ಬಣ್ಣದ ಒಂದೇ ರೀತಿಯ ಟ್ರಾಲಿ ಬ್ಯಾಗುಗಳನ್ನು ನೀಡಲಾಗಿರುತ್ತದೆ. ಬದ್ರುದ್ದೀನ್ ರವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ತನಗೆ ಜವಾಬ್ದಾರಿ ವಹಿಸಿದ 11 ಜನ ಪ್ರಯಾಣಿಕರ ಟ್ರಾಲಿ ಬ್ಯಾಗನ್ನು ಸ್ಕ್ಯಾನಿಂಗ್ ಮಾಡಿಸುತ್ತಾರೆ. ಬದ್ರುದ್ದೀನ್ ರವರು ಇಕ್ಬಾಲ್‌ರವರು ತನಗೆ ನೀಡಿದ ಹಣವಿದ್ದ ಟ್ರಾಲಿ ಬ್ಯಾಗನ್ನು ಲಗೇಜ್ ಮಾಡಿರುತ್ತಾರೆ. ಒಟ್ಟು 34 ಜನರು ದಿನಾಂಕ 30-04- 2024 ರಂದು ಇಂಡಿಗೊ ವಿಮಾ ಸಂಖ್ಯೆ 6E6523 ರಲ್ಲಿ ಸಂಜೆ 5.30 ಗಂಟೆಗೆ ಮಂಗಳೂರಿನಿಂದ ಮುಂಬೈಗೆ ಹೊರಟು ಸಂಜೆ 6.46 ಕ್ಕೆ ಮುಂಬೈ ತಲುಪಿ, ತದನಂತರ ಮುಂಬೈನಿಂದ ಇಂಡಿಗೊ ವಿಮಾನ (ಸಂಖ್ಯೆ 6E 91 (A321) ದಲ್ಲಿ ಹೊರಟು ದಿನಾಂಕ 01-೦5-2024 ರಂದು ರಾತ್ರಿ ಸುಮಾರು 10.25 ಕ್ಕೆ ಹೊರಟು ರಾತ್ರಿ 1.30 ಗಂಟೆಗೆ ಜೆದ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿರುತ್ತಾರೆ.

ಬದ್ರುದ್ದೀನ್ ರವರು ತನ್ನಲಿದ್ದ ಟ್ರಾಲಿ ಬ್ಯಾಗನ್ನು ವಿಮಾನ ನಿಲ್ದಾಣದಿಂದ ಹೊರಗಡೆ ತೆಗೆದುಕೊಂಡು ಹೋಗಿ ತಮ್ಮ ಬಸ್ಸಿನ ಬಳಿ ಹೋಗಿ ನೋಡಿದಾಗ ಯಾರೋ ಕಳ್ಳರು ಅವರ ಟ್ರಾಲಿಬ್ಯಾಗನ ಚಿಕ್ಕ ಬೀಗವನ್ನು ಮುರಿದು ಅದರಲ್ಲಿದ್ದ 26432 ಸೌದಿ ರಿಯಲ್ ಹಣ ಕಳವು ಮಾಡಿರುವುದು ಕಂಡು ಬಂತು. ಬಸ್ಸಿನವರು ಬೇಗ ಹೊರಡುವಂತೆ ಹೇಳಿದ್ದರಿಂದ 34 ಜನ ಪ್ರಯಾಣಿಕರು ಬಸ್ಸಿನಲ್ಲಿ ಮದೀನಾಗೆ ಹೋಗಿರುತ್ತಾರೆ. ಬದ್ರುದ್ದೀನ್ ರವರು ಉಮ್ರಾ ಯಾತ್ರೆ ಮುಗಿಸಿ ಬಂದು ದಿನಾಂಕ 30-04-2024 ರಂದು ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ಇವರ ದೂರಿನ ಮೇರೆಗೆ ದಿನಾಂಕ 3೦-೦5-2024 ರಂದು ಬಜ್ಪೆ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿರುತ್ತದೆ. ಆದರೆ ಬೇಸರ ವಿಷಯವೇನೆಂದರೆ ಈ ಕ್ಷಣದವರೆಗೂ ಈ ಕೇಸ್‌ನಲ್ಲಿ ಸಂತ್ರಸ್ತ ಬದ್ರುದ್ದೀನ್ ರವರಿಗೆ ನ್ಯಾಯ
ಸಿಕ್ಕಿರುವುದಿಲ್ಲ. ಆದುದರಿಂದ ಬದ್ರುದ್ದೀನ್‌ರವರು ತುಳುನಾಡ ರಕ್ಷಣಾ ವೇದಿಕೆಯನ್ನು ಸಂಪರ್ಕಿಸಿ ಕಾನೂನು ಹೋರಾಟಕ್ಕೆ ಬೆಂಬಲಿಸುವಂತೆ ವಿನಂತಿಸಿರುತ್ತಾರೆ.

ಆದುದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಪೊಲೀಸ್ ಆಯುಕ್ತರು, ಮಾನ್ಯ ಜಿಲ್ಲಾಧಿಕಾರಿಗಳು ಮಾನ್ಯ ವಿಮಾನಯಾನ ಸಚಿವರಿಗೆ ನಾವು ಮನವಿಯನ್ನು ಸಲ್ಲಿಸಿದ್ದು. ವಿಮಾನ ನಿಲ್ದಾಣದ ಕಳ್ಳತನದ ಜಾಲವನ್ನು ಭೇದಿಸುವಂತೆ ಒತ್ತಾಯಿಸಿರುತ್ತೇವೆ. ಹಾಗೂ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಎದುರುಗಡೆ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಹಾಗೂ ಟ್ರೂರ‍್ಸ್ ಟ್ರಾವೆಲ್ಸ್ ರವರ ಸಹಕಾರದೊಂದಿಗೆ ಪ್ರತಿಭಟನಾ ಸಭೆ ಕೈಗೊಳ್ಳುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಣ ಕಳೆದುಕೊಂಡಿರುವ ಬದ್ರುದ್ದೀನ್ ರವರು ತನ್ನ ಸೌದಿ ಅರೇಬಿಯಾದಲ್ಲಿ ಅನುಭವಿಸಿದ ತನ್ನ ಸಂಕಷ್ಟಗಳನ್ನು ಹಂಚಿಕೊಂಡರು. ಟೂರ್ಸ್ ಅಂಡ್ ಟ್ರಾವೆಲ್ಸ್ ಏಜೆಂಟ್ ಇಕ್ಬಾಲ್ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಳ್ಳಾಲ ತಾಲೂಕು ಗೌರವಾಧ್ಯಕ್ಷ ಡಾಕ್ಟರ್ ಶೇಕ್ ಭಾವ ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಸುಕೇಶ್ ಉಚ್ಚಿಲ್ ಜಿಕೆ, ಜಾಕಿರ್ ಇಕ್ಲಾಸ್ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *