ಸುಳ್ಯ: ಭೀಕರ ಕಾರು ಅಪಘಾತ- ಓರ್ವ ಗಂಭೀರ

ಸುಳ್ಯ: ಭೀಕರ ಕಾರು ಅಪಘಾತ ಸಂಭವಿಸಿ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಾಯಣಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಸುಳ್ಯ ಸಂಪಾಜೆ ಬಳಿ ನಡೆದಿದೆ. ಕಾರಿನಲದಲಿದ್ದವರು ಮಂಡ್ಯ ಮೂಲದ ನಾಲ್ವರು ಫೋಟೋ ಗ್ರಾಫರ್ಸ್ ಹೊನ್ನಾವರದಲ್ಲಿ ತಮ್ಮ ಕೆಲಸ ಮುಗಿಸಿ ವಾಪಸ್ ಮಂಡ್ಯಕ್ಕೆ ಹೊರಟಿದ್ದರು. ಈ ವೇಳೆ ರಾತ್ರಿ 3 ಗಂಟೆಯ ವೇಳೆಗೆ ಸಂಪಾಜೆ ಗೇಟಿನಿಂದ ಸ್ವಲ್ಪ ದೂರದಲ್ಲಿ ನಿಯಂತ್ರಣ ತಪ್ಪಿದ ವೋಕ್ಸ್‌ವ್ಯಾಗನ್ ಕಾರು ರಸ್ತೆಯ ರಕ್ಷಣಾ ಗೋಡೆಗೆ ಢಿಕ್ಕಿಯಾಗಿದೆ. ರಸ್ತೆಯ ಬದಿಯ ಕಬ್ಬಿಣದ ತಡೆಗೋಡೆಗೆ ಢಿಕ್ಕಿ ಹೊಡೆದ ಕಾರಿನೊಳಗೆ ಕಬ್ಬಿಣದ ತಡೆಗೋಡೆ ನುಗ್ಗಿದೆ. ಢಿಕ್ಕಿಯ ರಭಸಕ್ಕೆ ಕಾರು ಛಿದ್ರ ವಾಗಿದೆ. ಅಪಘಾತದ ತೀವ್ರತೆಗೆ ಓರ್ವನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಉಳಿದಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

Leave a Reply