Visitors have accessed this post 617 times.
ಬಂಟ್ವಾಳ ತಾಲೂಕಿನ ಕೊಳ್ನಾಡು ಪಂಚಾಯತ್ ಸ್ವಚ್ಚತಾಗಾರರಾಗಿ 15 ವರ್ಷಗಳ ಕಾಲ ಸೇವೇ ಸಲ್ಲಿಸಿದ ಸುಂದರ್ ಅಗರಿ 55 ವರ್ಷ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.ಇವರು ಪತ್ನಿ, ಒಂದು ಗಂಡು ಒಂದು ಹೆಣ್ಣು ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ…ಇವರ ನಿಧನಕ್ಕೆ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಹಾಲಿ ಅದ್ಯಕ್ಷರಾದ ಶ್ರೀ ಅಶ್ರಪ್ ಕೆ ಸಾಲೆತ್ತೂರು, ಉಪಾದ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್ ಸಹಿತ ಗ್ರಾ.ಪಂಚಾಯತ್ ಸದಸ್ಯರುಗಳು ತೀವ್ರ ಸಂತಾಪ ಸೂಚಿಸಿರುತ್ತಾರೆ..